ಜ್ಯೇಷ್ಠಾ 1
	ವೃಶ್ಚಿಕ ರಾಶಿಯ ಪ್ರಧಾನ ನಕ್ಷತ್ರ (ಏಂಟಾರೀಸ್; (ಚಿ) ಸ್ಕಾರ್ಪಿಯೈ). ಇದರ ವಿಷುವದಂಶ 16 ಗಂ. 26.3 ಮಿ. ಮತ್ತು ಘಂಟಾ ವೃತ್ತಾಂಸ-26' 19' (ಎರಡೂ 1950ರ ಬೆಲೆಗಳು). ಕಿತ್ತಳೆ ಬಣ್ಣದ ಈ ನಕ್ಷತ್ರ ಮೇಲುನೋಟಕ್ಕೆ ಮಂಗಳ ಗ್ರಹದಂತೆಯೇ ತೋರುವುದರಿಂದ ಮಂಗಳವೈರಿ ಎನ್ನುವ ಅರ್ಥವನ್ನು ನೀಡುವ ಏಂಟಾರೀಸ್ ಹೆಸರು ಇದಕ್ಕೆ ಬಂದಿದೆ. ಆರೆಸ್ ಎಂಬುದು ಯುದ್ಧದೇವತೆಯೇ (ಮಂಗಳದ) ಹೆಸರು. ಉಜ್ಜ್ವಲ ನಕ್ಷತ್ರಗಳ ಪೈಕಿ ಜ್ಯೇಷ್ಠಾ ಒಂದು. ದೃಗ್ಗೋಚರ ಪ್ರಕಾಶದ ಇಳಿಕ್ರಮದಲ್ಲಿ ನಕ್ಷತ್ರಗಳನ್ನು ಅಳವಡಿಸಿದರೆ ಸೂರ್ಯನಿಗೆ ಮೊದಲ ಮಣೆಯೂ ಜ್ಯೇಷ್ಠಾಕ್ಕೆ ಹದಿನೇಳನೆಯ ಮಣೆಯೂ ದೊರೆಯುತ್ತವೆ. ಸೂಯ್ವ್ಯಾಸಕ್ಕಿಂತ ಜ್ಯೇಷ್ಠಾವ್ಯಾಸ 300 ಪಟ್ಟು ಹಿರಿದು. ಅಲ್ಲಿಗೆ ಈ ನಕ್ಷತ್ರದ ಒಡಲೊಳಗೆ 300 (3) = 27,000,000 ಸೂರ್ಯರನ್ನು ಗಿಡಿಯಬಹುದೆಂದಾಯಿತು ಇದೊಂದು ಮಹಾದೈತ್ಯ ನಕ್ಷತ್ರ. ಇದನ್ನು ಸೂರ್ಯನಿರುವಲ್ಲಿ ಪ್ರತಿಸ್ಥಾಪಿಸಿದ್ದೇ ಆದರೆ ಜ್ಯೇಷ್ಠಾದ ಗರ್ಭದ ಒಳಗೆ ಮೊದಲ ಮೂರು ಗ್ರಹಗಳೂ (ಬುಧ, ಶುಕ್ರ, ಭೂಮಿ) ಅಡಗಿಹೋಗಿರುತ್ತವೆ ಮಂಗಳ ಮಾತ್ರ ಜ್ಯೇಷ್ಠಾದ ತೀರ ಹತ್ತಿರ ಹೊರಗಿರುತ್ತದೆ. ಬರಿಗಣ್ಣಿಗೆ ಕೇವಲ ಸಾಧಾರಣ ನಕ್ಷತ್ರವಾಗಿ (ಹದಿನೇಳನೆಯದಾಗಿ; ಎರಡನೆಯ ಮತ್ತು ಮೂರನೆಯ ಮಣೆಗಳಲ್ಲಿರುವ ಲುಬ್ಧಕ, ಅಗಸ್ತ್ಯ ನಕ್ಷತ್ರಗಳ ಪ್ರಕಾಶ ಕಣ್ಣು ಕೋರೈಸುವಂತಿದೆ) ಮಿನುಗುವ ಈ ನಕ್ಷತ್ರಕ್ಕೆ ಜ್ಯೇಷ್ಠಾ (ಬಲು ದೊಡ್ಡದು) ಎಂಬ ಅನ್ವರ್ಥನಾಮ ಹೇಗೆ ಒದಗಿ ಬಂತೆಂಬುದು ಪೌರಾಣಿಕ ಯುಗದ ಒಂದು ವಿಸ್ಮಯ.
ಕೆಲವು ಮುಖ್ಯ ನಕ್ಷತ್ರಗಳು  ದೃಗ್ಗೋಚರ ಕಾಂತಿಮಾನ  ದೂರ (ಜ್ಯೋತಿರ್ವರ್ಷ)  ಕಾಂತಿಮಾನ  ದೀಪ್ತಿ (ಸೂರ್ಯ = 1)

ಸೂರ್ಯ             -25,8              8 ಬೆಳಕಿನ ಮಿನಿಟುಗಳು 	   5.0            1.0
ಲುಬ್ಧಕ               -1.6                  8.6        	 	  -1.3           30.0
ಅಗಸ್ತ್ಯ                -0.9                 19.6         	  -3.2          19900.0
(α) ಸೆಂಟಾರಿ
(ಸಮೀಪತಮ ನಕ್ಷತ್ರ)       0.1                 4.3      		  -4.7             1.3
ಜ್ಯೇಷ್ಠಾ                 1.2                424          	  -3.2            1900.0
(ಸಿ.ಎನ್.ಎಸ್.)

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ